You Tube

Wednesday 7 February 2018

ಸಾಮಾನ್ಯ ವಿಜ್ಞಾನ

1.ನಾವು ಉಸಿರಾಡುವಾಗ ಒಳತೆಗೆದುಕೊಳ್ಳುವ ಗಾಳಿಯು ಗಾತ್ರದಲ್ಲಿ  ಶೇ21 ಆಕ್ಸಿಜನ್ ನ್ನು ಒಳಗೊಂಡಿದೆ.ಹೊರಬಿಡುವ ಗಾಳಿಯು ಗಾತ್ರದಲ್ಲಿ ಶೇ16 ಆಕ್ಸಿಜನ್ ನ್ನು ಒಳಗೊಂಡಿರುತ್ತದೆ.

2.ವಾತಾವರಣದಲ್ಲಿ ಆಕ್ಸಿಜನ್ ಮಟ್ಟ ಶೇ15 ಕ್ಕಿಂತ ಕಡಿಮೆ ಇದ್ದರೆ ಅದು ದಹನಾನುಕೂಲಿ ಅಲ್ಲ.

3. ವಾತಾವರಣದಲ್ಲಿ ಆಕ್ಸಿಜನ್ ಮಟ್ಟ ಶೇ25ಕ್ಕಿಂತ ಹೆಚ್ಚು ಇದ್ದರೆ ಅದು ಕಾಡ್ಗಿಚ್ಚು ಮತ್ತು ನಂದಿಸಲು ಅಸಾಧ್ಯವಾದ ವಿಧದ ಬೆಂಕಿಗೆ ಕಾರಣವಾಗುತ್ತದೆ. 

4. ರಬ್ಬರ್ ಟೈರ್ ಮತ್ತು ಪ್ಲಾಸ್ಟಿಕ್ ನ್ನು  ಸುಟ್ಟಾಗ  ನೈಟ್ರೋಜನ್ ಆಕ್ಸೈಡ್  ಬಿಡುಗಡೆಯಾಗುತ್ತದೆ.

5. ಇಂಗಾಲದ ಮೊನಾಕ್ಸೈಡ್ ಮತ್ತು ಹೈಡ್ರೊಜನ್ ಗಳ ಮಿಶ್ರಣವನ್ನು ಜಲಾನಿಲ ಎನ್ನವರು.

6. ಇಂಗಾಲದ ಮೊನಾಕ್ಸೈಡ್ ಮತ್ತು ನೈಟ್ರೋಜನ್ ಗಳ ಮಿಶ್ರಣವನ್ನು ಪ್ರೋಡ್ಯೂಸರ್ ಅನಿಲ ಎನ್ನುವರು.

7. ಘನೀಕರಿಸಿದ ಇಂಗಾಲದ ಡೈಆಕ್ಸೈಡ್ ನ್ನು ಶುಷ್ಕ ಮಂಜುಗಡ್ಡೆ ಎನ್ನುವರು.

8.ಒಂದು ವಸ್ತುವಿನ   ಪಿ ಎಚ್ ಬೆಲೆಯು ಅಳತೆ ಪಟ್ಟಿಯ ಮೇಲೆ 0 ಯಿಂದ 7 ರ ಒಳಗೆ ಇದ್ದರೆ ಆ ವಸ್ತು ಆಮ್ಲೀಯವಾಗಿರುತ್ತದೆ.
9. ಒಂದು ವಸ್ತುವಿನ   ಪಿ ಎಚ್ ಬೆಲೆಯು ಅಳತೆ ಪಟ್ಟಿಯ ಮೇಲೆ 7ಕ್ಕಿಂತ ಹೆಚ್ಚಾಗಿದ್ದು 14   ರ ವರಗೆ ಇದ್ದರೆ ಆ ವಸ್ತು ಪ್ರತ್ಯಾಮ್ಲೀಯವಾಗಿರುತ್ತದೆ.
10 ಒಂದು ವಸ್ತುವಿನ   ಪಿ ಎಚ್ ಬೆಲೆಯು 7 ಮಾತ್ರ ಆಗಿದ್ದರೆ ಆ ವಸ್ತು ತಟಸ್ಥವಾಗಿರತ್ತದೆ.
11. ಮಾನವನ ದೇಹವು 7 ರಿಂದ 7.8 ರ ಪಿ ಎಚ್ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ.
12. ಪಿ ಎಚ್ ಬೆಲೆ 6.5 ಕ್ಕಿಂತ ಕಡಿಮೆಯಾದರೆ ಆಸಿಡಿಟಿ ಜಾಸ್ತಿಯಾಗಿ ಹಲ್ಲಿನ ತೊಂದರೆಯಾಗುತ್ತದೆ.
                                            --------ಮುಂದುವರೆಯುವುದು.

Followers